India vs New zealand T20 world final 2026 – ಭಾರತದ ಭರ್ಜರಿ ಗೆಲುವು.

Published by venkteshnaik2003@gmail.com on

2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಅದ್ದೂರಿಯಾಗಿ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡವು ಅದ್ಬುತ ಪ್ರದರ್ಶನ ನೀಡುತ್ತಾ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿದೆ.

ಭಾರತದ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ.

ಭಾರತ ತಂಡವು ಮೊದಲಿಗೆ ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು, ಹಾಗೆ ಭಾರತ ತಂಡದ ಓಪನಿಂಗ್ ಬ್ಯಾಟ್ಸ್ ಮ್ಯಾನ್ ಗಳಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮ ಅವರ ಅತ್ಯುತ್ತಮ ಜೊತೆ ಆಟದ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಮತ್ತೊಂದು ಬಾರಿ ಫೈನಲ್ ನಲ್ಲಿ ಸಂಜು ಸ್ಯಾಮ್ಸನ್ ಅದ್ಭುತವಾಗಿ ಆಡಿದ್ದು ತಂಡಕ್ಕೆ ಬಲವಾದ ಸ್ಕೋರ್ ನೀಡಿದರು. ಹಾಗೆ ಈಶಾನ್ ಕಿಶನ್ ಕೂಡ ವೇಗವಾಗಿ ರನ್ ಗಳಿಸಿ ಉತ್ತಮ ಆರಂಭ ಕೊಟ್ಟರು, ಹೀಗಾಗಿ ಭಾರತ ತಂಡವು 255 ರನ್ ಗಳ ಬೃಹತ್ ಮೊತ್ತವನ್ನು ನ್ಯೂಜಿಲ್ಯಾಂಡ್ ತಂಡಕ್ಕೆ ನೀಡಿತು

ನ್ಯೂಜಿಲೆಂಡ್ ಗೆ ಕಠಿಣ ಗುರಿ ನೀಡಿದ ಭಾರತದ ಆಟಗಾರರು.

ಭಾರತ ತಂಡವು ದೊಡ್ಡ ಟಾರ್ಗೆಟ್ ನೀಡಿದ ಕಾರಣದಿಂದ ನ್ಯೂಜಿಲೆಂಡ್ ತಂಡದ ಮೇಲೆ ಆರಂಭದಿಂದಲೇ ಒತ್ತಡ ಇತ್ತು. ಆದರಿಂದ ತಂಡವು ಸೋಲಲು ಕಾರಣವಾಯಿತು.

ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರರಾದ ಫಿನ್ ಅಲೆನ್ ಹಾಗೂ ಟೀಮ್ ಶೈಫರ್ಟ್ ಅವರ ಜೊತೆ ಕಂಡು ಬರಲಿಲ್ಲ ಕಳೆದ ಪಂದ್ಯದಲ್ಲಿ ಮಿಂಚಿದ ಫಿನ್ ಅಲೆನ್ ಅವರು ಕೇವಲ 9 ರನ್ ಗಳನ್ನು ಬಾರಿಸಿ ಔಟಾದರು ಅದಾದ ನಂತರ ಉತ್ತಮ ಬ್ಯಾಟಿಂಗ್ ಅನ್ನು ಮಾಡಿದ ಟೀಮ್ ಶೈಫರ್ಟ್ ರವರು ಕೂಡ 50 ರನ್ ಗಳನ್ನು ಬಾರಿಸಿ ಔಟಾದರು ನಂತರ ಪ್ರತಿಯೊಬ್ಬ ಬ್ಯಾಟ್ಸಮನ್ ಗಳು ಕೂಡ ಯಾವುದೇ ರನ್ ಗಳನ್ನು ಮಾಡುವಲ್ಲಿ ಯಶಸ್ವಿ ಕಾಣಲಿಲ್ಲ ಹಾಗಾಗಿ ತಂಡವು ಸೋಲಲು ಕಾರಣವಾಯಿತ

ಭಾರತ ತಂಡಕ್ಕೆ ಅಕ್ಷರ್ ಪಟೇಲ್ ಹಾಗು ಜಸ್ಪ್ರೀತ್ ಬುಮ್ರಾ ಮ್ಯಾಜಿಕ್.

256 ಬೃಹತ್ ಚೇಸಿಂಗ್ ಗೆ ಇಳಿದ ಕಿವಿಸ್ ಪವರ್ ಪ್ಲೇ ನಲ್ಲಿ ಪವರ್ ಕಳೆದುಕೊಂಡಿತು. ಆ ಬೃಹತ್ ಮೊತ್ತವನ್ನು ಕಲೆ ಹಾಕಲು ಭಾರತ ತಂಡದ ಅಕ್ಷರ್ ಹಾಗೂ ಬುಮ್ರಾ ಅವರು ತಡೆಗಟ್ಟಿದರು. ಜಸ್ಪ್ರೀತ್ ಬುಮ್ರಾ 4ಓವರ್ ಗೆ 15ರನ್ ನೀಡಿ 4 ವಿಕೆಟ್ ಪಡೆದುಕೊಂಡರು, ಹಾಗೂ ಅಕ್ಷರ್ ಪಟೇಲ್ 4 ಓವರ್ ಗೆ 27 ರನ್ ಗಳನ್ನು ನೀಡಿ 3 ವಿಕೆಟ್ ಪಡೆದು ತಂಡಕ್ಕೆ ಮ್ಯಾಜಿಕ್ ಮಾಡಿದರು.

ದಿಗ್ಗಜರ ಸಾಲಿನಲ್ಲಿ ಸೂರ್ಯಕುಮಾರ್ ಯಾದವ್.

ಸೂರ್ಯ ಕುಮಾರ್ ಯಾದವ್ ಐಸಿಸಿ ಟ್ರೋಪಿ ಗೆದ್ದ 5ನೇ ಭಾರತೀಯ ನಾಯಕ ಎಂದು ಎನಿಸಿಕೊಂಡಿದ್ದಾರೆ ಈ ಹಿಂದೆ ಕಪಿಲ್ ದೇವ್ (1983 ಏಕದಿನ ವಿಶ್ವಕಪ್ ), ಸೌರವ್ ಗಂಗೂಲಿ (2002ರ ಚಾಂಪಿಯನ್ ಟ್ರೋಫಿ), ಎಂಎಸ್ ಧೋನಿ (2017ರ ಟಿ20 ವಿಶ್ವ ಕಪ್ , 2011ರ ವಿಶ್ವಕಪ್, 2013ರ ಚಾಂಪಿಯನ್ ಟ್ರೋಫಿ) ಮತ್ತು ರೋಹಿತ್ ಶರ್ಮ (2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ ಟ್ರೋಫಿ) ಗೆದ್ದಿದ್ದರು ಇವರ ಸಾಲಿನಲ್ಲಿ ಈಗ ಸೂರ್ಯಕುಮಾರ್ ಯಾದವೂ ಕೂಡ ಒಂದು ಒಬ್ಬರಾಗಿದ್ದಾರೆ.

ಮತ್ತೆ ಭಾರತ ತಂಡದ ಹೀರೋ ಆದ ಸಂಜು ಸ್ಯಾಮ್ಸನ್

ಈ ಟಿ20 ವಿಶ್ವಕಪ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಭಾರತದ ಅಭಿಮಾನಿಗಳ ಹೀರೊ ಆಗಿ ಹೊರಹೋಮ್ಮಿದರು.

ಅಭಿಷೇಕ್ ಶರ್ಮಾ ಅವರ ಆಟದಿಂದ ಪವರ್ ಪ್ಲೇನಲ್ಲಿ ಅತ್ಯುತ್ತಮವಾದ ರನ್.

ಆರಂಭಿಕವಾಗಿ ಎರಡು ಓವರ್ ಗಳಿಗೆ ಕೇವಲ 12 ರನ್ಗಳನ್ನು ಸೇರಿಸಿದ ಅಭಿಷೇಕ್ ಶರ್ಮ ಹಾಗೂ ಸಂಜು ಸನ್ಸನ್ ಜೋಡಿ , ನಂತರ ಅಭಿಷೇಕ್ ಶರ್ಮ ಅವರು ಕೇವಲ 18 ಎಸೆತಗಳಲ್ಲಿ 50 ರನ್ ಬಾರಿಸಿದರು ಹಾಗಾಗಿ ಪವರ್ ಪ್ಲೇನಲ್ಲಿ ತಂಡದ ಮೊತ್ತ 92 ರನ್ ಬಾರಿಸಿದರು.

ಭಾರತಕ್ಕೆ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ…

ಚಾಂಪಿಯನ್ಸ್! T20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಈ ಅಮೋಘ ಗೆಲುವು ಪ್ರತಿಯೊಬ್ಬ ಭಾರತೀಯರಲ್ಲೂ ಹೆಮ್ಮೆ ಮತ್ತು ಸಂಭ್ರಮ ತಂದಿದೆ ವೆಲ್ ಡನ್ ಟೀಮ್ ಇಂಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಭಹಾರೈಸಿದ್ದಾರೆ.

ಸಾರಾಂಶ.

ಒಟ್ಟಾರೆ 2026 ಟಿ20ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಅತ್ತುತ್ತಮ ಬ್ಯಾಟಿಂಗ್ ಹಾಗು ಬೌಲಿಂಗ್ ಪ್ರದರ್ಶನ ನೀಡಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮ ಅವರ ಬ್ಯಾಟಿಂಗ್ ಹಾಗು ಬುಮ್ರಾ ಮತ್ತು ಪಟೇಲ್ ಅವರ ಬೌಲಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.ಈ ಗೆಲುವಿನೊಂದಿಗೆ ಭಾರತ ತಂಡ ಮತ್ತೊಮ್ಮೆ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ.

player of the match: ಜಸ್ಪ್ರೀತ್ ಬುಮ್ರಾ 4 ಓವರ್ ಗಳಲ್ಲಿ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದು ಭಾರತ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

ಭಾರತದ ಟಾಪ್ ಸ್ಕೋರರ್ : ಸಂಜು ಸ್ಯಾಮ್ಸನ್ 89 ರನ್

ಪಂದ್ಯದ ಸ್ಕೋರ್ :255/5(20 ಓವರ್ )

ನ್ಯೂಜಿಲ್ಯಾಂಡ್ :159/10(19 ಓವರ್)


0 Comments

ನಿಮ್ಮದೊಂದು ಉತ್ತರ

Avatar placeholder

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ