ಮಾರ್ಚ್ 28ಕ್ಕೆ IPL ಹಬ್ಬ ಮೊದಲ ಪಂದ್ಯ RCB Vs SRH

Published by venkteshnaik2003@gmail.com on

ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಆರಂಭಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ IPL 19ನೇ ಆವೃತ್ತಿಯ ಆರಂಭಿಕ ಪಂದ್ಯ ಮಾರ್ಚ್ 28ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ

IPL ವಿಶ್ವದ ಜನಪ್ರಿಯ T20 ಟೂರ್ನಿ

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತ್ಯಂತ ದೊಡ್ಡ ಮತ್ತು ಜನಪ್ರಿಯ T20 ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಈ ಟೂರ್ನಿಯನ್ನು ನೋಡಲು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ. ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುತ್ತಾರೆ. ಇದರಿಂದ IPL ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಗಮನ ಸೆಳೆಯುತ್ತದೆ.

ಆರಂಭಿಕ 20 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

ಈ ಬಾರಿ ಬಿಸಿಸಿಐ (BCCI) IPL 2026 ಟೂರ್ನಿಯ ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಏಕೆಂದರೆ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಈ ಕಾರಣದಿಂದ IPL ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಪ್ರಕಟಿಸಲು ಬಿಸಿಸಿಐ ನಿರ್ಧರಿಸಿದೆ.
ಮೊದಲ ಹಂತದಲ್ಲಿ ಮಾರ್ಚ್ 28ರಿಂದ ಏಪ್ರಿಲ್ 12ರವರೆಗೆ ನಡೆಯುವ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನಂತರ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಮಾರ್ಚ್ 25ಕ್ಕೆ ಮುಂಬೈನಲ್ಲಿ ಎಲ್ಲಾ ಕ್ಯಾಪ್ಟೆನ್ಸ್ ಗಳ ಮೀಟ್.

ಐಪಿಎಲ್ ಶುರುವಾಗುವ ಮುಂಚಿತವಾಗಿ ಮಾರ್ಚ್ 25ರಂದು ಎಲ್ಲಾ ತಂಡದ ನಾಯಕರು ಮತ್ತು ತಂಡದ ಕೋಚ್ಗಳೊಂದಿಗೆ ಬಿಸಿಸಿಯಿ ಸಭೆ ನಡೆಸಲಿದೆ ಮುಂಬೈನಲ್ಲಿ ಸಭೆ ನಡೆಯಲಿದ್ದು ಟೂರ್ನಲ್ಲಿ ಕೆಲ ನಿಯಮಗಳ ಕುರಿತು ಪ್ರಾಂತ್ಯಾಗಳಿಗೆ ಮಾಹಿತಿ ನೀಡಲಾಗುತ್ತದೆ. ಇದಕ್ಕೂ ಮುನ್ನ ಮಾರ್ಚ್ ಹದಿನೈದರಂದು ನವದೆಹಲಿಯಲ್ಲಿ ಎಲ್ಲಾ ತಂಡಗಳ ನಾಯಕರು ಫೋಟೋಶೂಟ್ ಮಾಡಿಸಿ ಕೊಳ್ಳಬೇಕೆಂದು ಬಿಸಿಸಿ ಸೂಚನೆ ನೀಡಿದೆ.

ಈ ಬಾರಿಯ ಎಲ್ಲಾ ತಂಡದ ಕ್ಯಾಪ್ಟನ್ಸ್ ಗಳು ಹೊಸ ಜರ್ಸಿ ಎನ್ನು ಧರಿಸಿ ಮೈದಾನ ಕೇಳಿದ್ದಾರೆ ಆದ್ದರಿಂದ ಮಾರ್ಚ್ 15 ರಂದು ಎಲ್ಲಾ ತಂಡಗಳ ಕ್ಯಾಪ್ಟನ್ ಗಳು ಫೋಟೋಶೂಟ್ ಮಾಡಿಸಿ ಎಲ್ಲಾ ತಂಡಗಳ ಅಭಿಮಾನಿಗಳಿಗೆ ನಿರೀಕ್ಷೆಯನ್ನು ಉಂಟು ಮಾಡಲು ಬಿಸಿಸಿಐ ತೀರ್ಮಾನಿಸಿದೆ.

ಮಾರ್ಚ್ 13ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣ ಪರಿಶೀಲನೆ.

ಮೊದಲ ಹಂತದ ವೇಳಾಪಟ್ಟಿಯ ಪ್ರಕಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಿಗದಿಯಾಗಿದ್ದರೂ, ಪಂದ್ಯಗಳ ಆಯೋಜನೆಗೆ ಅನುಮೋದನೆ ಇನ್ನು ಬಾಕಿ ಇದೆ ಎಂದು ಬಿಸಿಸಿಐ ತಿಳಿಸಿದೆ. ಏಕೆಂದರೆ ಕಳೆದ ವರ್ಷ 2025 ರಲ್ಲಿ ಆರ್‌ಸಿಬಿ ಚುಚ್ಚಲ ಕಪ್ ಗೆದ್ದ ನಂತರ ಬೆಂಗಳೂರಿನಲ್ಲಿ ಜೂನ್ 4ಕ್ಕೆ ಕಾಲ್ತುಳಿತಕ್ಕೆ ಸುಮಾರು 10ಜನ ಮರಣ ಹೊಂದಿದರು ಅದರಿಂದ ಆ ಘಟನೆ ನಂತರ ಮೈಕಲ್ ಡಿ, ಕುನ್ಹಾ ವರದಿಯ ಶಿಫಾರಸುಗಳ ಅನ್ವಯ ಕೆಎಸ್ ಅಗತ್ಯ ಸುರಕ್ಷತಾ ಕ್ರಮಗಳು ಕೈಗೊಂಡಿದೆ. ಆದರಿಂದ ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿಯು ಮಾರ್ಚ್ 13ಕ್ಕೆ ಕ್ರೀಡಾಂಗಣ ಪರಿಶೀಲನೆ ನಡೆಸಿ ಸಭೆ ನಡೆಸಲಿದೆ. ಜತೆಗೆ ಪಂದ್ಯ ಆಯೋಜನೆ ವ್ಯವಸ್ಥೆಯ ಅಣುಕು ಪ್ರದರ್ಶನ ನಡೆಯಲಿದ್ದು ನಂತರ ತಜ್ಞರ ಸಮಿತಿಯ ವರದಿಯ ಆಧಾರದಲ್ಲಿ ಮುಂಬರುವ ಆವೃತ್ತಿಯ ಪಂದ್ಯಗಳ ಆಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

10 ನಗರಗಳಲ್ಲಿ ಪಂದ್ಯಗಳು

ಮೊದಲ ಹಂತದ IPL ಪಂದ್ಯಗಳು ದೇಶದ 10 ಪ್ರಮುಖ ನಗರಗಳಲ್ಲಿ ನಡೆಯಲಿವೆ. ಈ ಪಂದ್ಯಗಳಲ್ಲಿ ಎಲ್ಲಾ 10 ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ.
ಪಂದ್ಯಗಳು ನಡೆಯುವ ಪ್ರಮುಖ ನಗರಗಳು:
ಬೆಂಗಳೂರು
ಮುಂಬೈ
ಗುವಾಹಟಿ
ಮುಲ್ಲನ್‌ಪುರ
ಲಖನೌ
ಕೊಲ್ಕತ್ತಾ
ಚೆನ್ನೈ
ನವದೆಹಲಿ
ಅಹಮದಾಬಾದ್
ಹೈದರಾಬಾದ್

ಐಪಿಎಲ್ 2026 ಅಭಿಮಾನಿಗಳ ನಿರೀಕ್ಷೆ

2026 ರಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಈ ಬಾರಿ ಬಹಳ ನಿರೀಕ್ಷೆ ಉಂಟು ಮಾಡುತ್ತಿದೆ ಏಕೆಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಎಲ್ಲಾ ಟೀಮ್ ಗಳು ಬಲಿಷ್ಠವಾಗಿದೆ. ಅದರಲ್ಲೂ ಈ ವರ್ಷ ಮೊದಲ ಪಂದ್ಯವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ಇವೆರಡರ ನಡುವೆ ಪಂದ್ಯಾ ಶುರುವಾಗುತ್ತದೆ, ಪಂದ್ಯ ಶುರುವಾಗುವ ಮುನ್ನವೇ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಉಂಟು ಮಾಡುತ್ತಿದೆ ಆದ್ದರಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಬಹಳ ಕುತೂಹಲದಿಂದ ಪ್ರತಿಯೊಬ್ಬ ಅಭಿಮಾನಿಗಳಿಗೂ ನಿರೀಕ್ಷೆ ಉಂಟು ಮಾಡಿದೆ.


0 Comments

ನಿಮ್ಮದೊಂದು ಉತ್ತರ

Avatar placeholder

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ