RCB vs CSK: ಚಿನ್ನಸ್ವಾಮಿ ಮೈದಾನದಲ್ಲಿ ರನ್ ಮಳೆ – “ಚೆನೈ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಂಲೆಜರ್ಸ್ ಬೆಂಗಳೂರು!”

RCB ಸಂಭ್ರಮಾಚರಣೆಯ ಕ್ಷಣ
ಗತವೈಭವಕ್ಕೆ ಮರಳಿದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗಿಗೆ ಇಳಿದ ಆರ್ ಸಿಬಿ , ಮೊದಲಿಗೆ ಸಾಧಾರಣ ಆರಂಭ ಕಂಡರೂ, ನಂತರ ಬಿರುಸಿನ ಆಟಕ್ಕಿಳಿಯಿತು. ಅದರಲ್ಲೂ ಸ್ಲಾಗ್ ಓವರ್ ಗಳಲ್ಲಿ ಸಿಎಸ್ ಕೆ ಯಾ ಬೌಲರ್ಸ್ ಗಳ ಎದುರು ಉತ್ತಮ ಆಟವನ್ನು ಪ್ರದರ್ಶಿಸಿ ಮೂರು ವಿಕೆಟ್ ಗೆ 250 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಕೊನೆ “5ಓವರ್‌ಗಳಲ್ಲಿ” ಆರ್ಸಿಬಿ ಬರೋಬ್ಬರಿ 97 ರನ್ ಒಡೆದರು. ಇದರಲ್ಲಿ 12 ಸಿಕ್ಸರ್ ಗಳಿಂದಲೇ 72 ರನ್ ಗಳು ಬಂದವು. ಜತೆಗೆ 4 ಬೌಂಡರಿಗಳಿದ್ದವು. ಆದ್ದರಿಂದ ಉತ್ತಮ ಮೊತ್ತವನ್ನು ಕಲೆ ಹಾಕಲು ಯಶಸ್ವಿಯಾಯಿತು.
ಟೀಮ್ ಡೇವಿಡ್ ಹಾಗೂ ರಜತ್ ಪಾಟಿದಾರ್ ಸಿಕ್ಸರ್ ದರ್ಬಾರ್.
200ರ ಗಡಿ ದಾಟುವ ವಿಶ್ವಾಸದಲ್ಲಿದ್ದ ಆರ್‌ಸಿಬಿ, ಟೀಮ್ ಡೇವಿಡ್ ಹಾಗು ರಜತ್ ಪಾಟಿದಾರ್ ಸ್ಲಾಗ್ ಓವರ್ ಗಳಲ್ಲಿ ಪ್ರದರ್ಶಿಸಿದ ಸಿಕ್ಸರ್ ಗಳ ದರ್ಬಾರ್ ನಿಂದ ಎಲ್ಲರ ನಿರೀಕ್ಷೆಗಳನ್ನು ಮೀರಿ 250 ಪೆರಿಸುವಲ್ಲಿ ಯಶಸ್ವಿಯಾಯಿತು. ಇದು ಹಾಲಿ ಆವೃತ್ತಿಯಾ ಅತ್ಯಧಿಕ ಮೊತ್ತವೆನಿಸಿದೆ. ಡೇವಿಡ್ – ರಜತ್ ಜೋಡಿ ಮುರಿಯದೆ 4ನೇ ವಿಕೆಟ್ ಗೆ 36 ಎಸೆತಗಳಲ್ಲಿ 99 ರನ್ ಗಳಿಸಿದರು.
ಆರ್ ಸಿಬಿ ಎಚ್ಚರಿಕೆ ಆರಂಭ

ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಜೋಡಿ ಆರ್ ಸಿಬಿ ಎಚ್ಚರಿಕೆಯ ಆರಂಭ ಒದಗಿಸಿದರು. ಮೊದಲ 3 ಓವರ್ ಗಳಲ್ಲಿ ಇವರಿಬ್ಬರು 4 ಮತ್ತು 6 ಗಳನ್ನು ಬಾರಿಸದೆ ಬರಿ 1-2 ರನ್ ಓಡುವ ಮೂಲಕವೇ 17 ರನ್ ಸೇರಿಸಿದರು.ಈ ನಡುವೆ ಖಲಿಲ್ ಎಸೆದ 3ನೇ ಎಸೆತದಲ್ಲಿ ಶಿವಂ ದುಬೆ, ವಿರಾಟ್ ಕೊಹ್ಲಿ ಅವರ ಕ್ಯಾಚ್ ಅನ್ನು ಕೈಚೆಲ್ಲಿದರು. ಆಗ ಕೊಹ್ಲಿ 7 ರನ್ ಗಳಿಸಿದ್ದರು. ಮರು ಓವರ್ ನಲ್ಲಿ ಅಕ್ರಮಣಕಾರಿ ಆಟಕ್ಕಿಳಿದ ಕೊಹ್ಲಿ, ಮ್ಯಾತ್ ಹೆನ್ರಿ ಅವರ ಆ ಓವರ್ ನಲ್ಲಿ 16 ರನ್ ಕಸಿದರು. ಕೊಹ್ಲಿ 4ನೇ ಓವರ್ ನ 2ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಇದರಿಂದ ಪಂದ್ಯದ 20ನೇ ಎಸೆತದಲ್ಲಿ ಮೊದಲ ಬಾರಿ ಚೆಂಡು ಸಿಕ್ಸ್ ಹೋಯಿತು.
RCB ಬ್ಯಾಟಿಂಗ್ – ಬೌಂಡರಿಗಳ ಹಬ್ಬ
ಟಾಸ್ ಗೆದ್ದ RCB ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಆರಂಭಿಕ ಆಟಗಾರರು ವೇಗವಾಗಿ ರನ್ ಗಳಿಸಿ ತಂಡಕ್ಕೆ ಭದ್ರ ನೆಲೆ ನೀಡಿದರು.
ಮಧ್ಯ ಕ್ರಮದಲ್ಲಿ ಬಂದ Tim David ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ RCB ಪರವಾಗಿ ತಳ್ಳಿದರು. ಅವರು ಹೊಡೆದ ಸಿಕ್ಸರ್‌ಗಳು ಮೈದಾನದಲ್ಲಿ ಕೂಗಾಟಕ್ಕೆ ಕಾರಣವಾದವು.
ಕೊನೆಯ ಓವರ್‌ಗಳಲ್ಲಿ Tim David 30+ ರನ್ ಗಳಿಸಿ ಪಂದ್ಯವನ್ನು ತಿರುವು ಮಾಡಿದರು.
RCB ತಂಡ 20 ಓವರ್‌ಗಳಲ್ಲಿ 250/3 ಎಂಬ ಭಾರೀ ಮೊತ್ತವನ್ನು ದಾಖಲಿಸಿತು.
250 ಇದು ಐಪಿಎಲ್ ನಲ್ಲಿ RCB ತಂಡದ 3ನೇ ಗರಿಷ್ಠ ಮೊತ್ತವಾಗಿದೆ. 2013ರಲ್ಲಿ ಪುಣೆ ಎದುರು 263 ರನ್ ಗಳಿಸಿದ್ದು ಗರಿಷ್ಠವಾಗಿದ್ದರೆ, 2024ರಲ್ಲಿ Sunrisers Hyderabad ಎದುರು 262 ರನ್ ಗಳಿಸಿದ್ದು ಅದರ ನಂತರದಲ್ಲಿದೆ.
RCB ಗೆ ಸಾಲ್ಟ್ – ಪಡಿಕಲ್ ಆಸರೆ.
ಕೊಹ್ಲಿ ನಿರ್ಗಮನದ ಬಳಿಕ ಫಿಲ್ ಸಾಲ್ಟ್ (46ರನ್, 30 ಎಸೆತ, 3ಬೌಂಡರಿ , 2 ಸಿಕ್ಸರ್) ಮತ್ತು ದೇವದತ್ ಪಡಿಕಲ್ 2ನೇ ವಿಕೆಟ್ ಗೇ 37 ಎಸೆತಗಳಲ್ಲಿ 56 ರನ್ ಸೇರಿಸುವ ಮೂಲಕ ಉತ್ತಮ ಮೊತ್ತ ಕಲೆ ಆಕಿದರು. ಆದರೆ ಸಾಲ್ಟ್ ಅರ್ಧಶತಕದಂಚಿನಲ್ಲಿ ಶಿವಂ ದುಬೆ ಗೇ ವಿಕೆಟ್ ಒಪ್ಪಿಸಿದರು. ನಂತರ ಪಡಿಕಲ್ ಹಾಗೂ ನಾಯಕ ರಜತ್ ಪಾಟಿದಾರ್ ಜತೆಗೂಡಿ 3ನೇ ವಿಕೆಟ್ ಗೇ 21 ಎಸೆತಗಳಲ್ಲಿ 58ರನ್ ಸೇರಿಸಿ RCB ಮೊತ್ತವನ್ನು 14 ಓವರ್ ಗಳಲ್ಲೆ 150ರನ್ ಗಡಿ ದಾಟಿಸಿದರು.
CSK ಚೇಸ್ – ಆರಂಭ ಚೆನ್ನಾಗಿತ್ತು, ಅಂತ್ಯ ದುರ್ಬಲ
251 ರನ್ ಗುರಿ ಬೆನ್ನಟ್ಟಿದ CSK ತಂಡ ಉತ್ತಮ ಆರಂಭ ಪಡೆದರೂ, ಮಧ್ಯದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು.
ಮೇಲಿನ ಕ್ರಮದ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡಿದರೂ, RCB ಬೌಲರ್‌ಗಳು ನಿಯಂತ್ರಿತ ಬೌಲಿಂಗ್ ಮೂಲಕ ಒತ್ತಡ ಸೃಷ್ಟಿಸಿದರು.
ಮಧ್ಯ ಓವರ್‌ಗಳಲ್ಲಿ ವಿಕೆಟ್‌ಗಳು ಬಿದ್ದು ರನ್‌ರೇಟ್ ಕುಸಿತ
ಕೊನೆಯಲ್ಲಿ ಒತ್ತಡ ಹೆಚ್ಚಾಗಿ CSK ತಂಡ 207 ರನ್‌ಗಳಿಗೆ ಆಲೌಟ್ ಆಯಿತು
ಧೋನಿ ಇಲ್ಲದೆ ಸೀಟುಗಳು ಖಾಲಿ.
ಚೆನ್ನೈ ತಂಡದ ಹೃದಯವೇ ಆಗಿರುವ MS Dhoni ಈ ಪಂದ್ಯದಲ್ಲಿ ಕಾಣಿಸದಿರುವುದು ಅಭಿಮಾನಿಗಳಿಗೆ ದೊಡ್ಡ ಖಾಲಿತನವನ್ನುಂಟುಮಾಡಿತು. ಸಾಮಾನ್ಯವಾಗಿ CSK ಪಂದ್ಯಗಳಲ್ಲಿ ಧೋನಿ ಮೈದಾನಕ್ಕಿಳಿದ ಕ್ಷಣದಿಂದಲೇ ಸ್ಟೇಡಿಯಂ ಗದ್ದಲದಿಂದ ತುಂಬಿರುತ್ತದೆ. ಆದರೆ ಈ ಬಾರಿ ಅವರ ಗೈರುಹಾಜರಿಯಿಂದ ಪ್ರೇಕ್ಷಕರ ಕುರ್ಚಿಗಳು ಸಹ ಸ್ವಲ್ಪ ಖಾಲಿ ಕಾಣಿಸಿಕೊಂಡವು. ಧೋನಿ ಎನ್ನುವ ಹೆಸರು ಮಾತ್ರವಲ್ಲ, ಅದು ಅಭಿಮಾನಿಗಳ ಭಾವನೆ ಮತ್ತು ನಂಬಿಕೆಯ ಸಂಕೇತವಾಗಿದೆ. ಅವರಿಲ್ಲದೆ CSK ತಂಡದಲ್ಲಿ ಆ ಧೈರ್ಯ ಮತ್ತು ನಾಯಕತ್ವದ ಕಳೆ ಸ್ವಲ್ಪ ಕಡಿಮೆ ಕಂಡಿತು. ಈ ಕಾರಣದಿಂದಲೇ ಪಂದ್ಯದಲ್ಲಿ ಅಭಿಮಾನಿಗಳ ಉತ್ಸಾಹವೂ ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು ಸ್ಪಷ್ಟವಾಗಿತ್ತು.
ಉತ್ತಮ ಪ್ರದರ್ಶನ
ಪಂದ್ಯ ತಾರೆ – Tim David
ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ Tim David ಅವರಿಗೆ “Player of the Match” ಪ್ರಶಸ್ತಿ ದೊರೆಯಿತು.
ಸ್ಫೋಟಕ ಬ್ಯಾಟಿಂಗ್
ಮ್ಯಾಚ್ ಟರ್ನಿಂಗ್ ಪರ್ಫಾರ್ಮೆನ್ಸ್
Royal Challengers Bengaluru 250 ರನ್ ಗಡಿ ತಲುಪಿದ ಕ್ಷಣದಲ್ಲೇ ಮೈದಾನದಲ್ಲಿದ್ದ ಅಭಿಮಾನಿಗಳು ಗದ್ದಲದಿಂದ ಸಿಡಿದು, ಹಬ್ಬದಂತೆಯೇ ಸಂಭ್ರಮ ಆಚರಿಸಿದರು ಮತ್ತು ಇದು ಅಭಿಮಾನಿಗಳಿಗೆ ಮರೆಯಲಾಗದ ಕ್ಷಣವಾಗಿದೆ.ಅಭಿಮಾನಿಗಳಿಗೆ ಬೆಂಗಳೂರು ತಂಡವು ಇಷ್ಟು ರನ್ ಮಾಡಿರುವುದು ಇನ್ನು ಎಚ್ಚು ಸಂತೋಷವನ್ನು ಉಂಟುಮಾಡಿದೆ. ಈ ದಿನ ಅಭಿಮಾನಿಗಳಿಗೆ ಮರೆಯಲಾಗದ ದಿನವಾಗಿದೆ.
0 Comments