ಕರ್ನಾಟಕ 2026- ಬಜೆಟ್27: ಸಿಎಂ ಸಿದ್ದರಾಮಯ್ಯ ಘೋಷಿಸಿದ ಪ್ರಮುಖ ಯೋಜನೆಗಳು ಮತ್ತು ಮುಖ್ಯಾಂಶಗಳು

Published by venkteshnaik2003@gmail.com on

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿ ಎಂ ಸಿದ್ದರಾಮಯ್ಯ 7 ಮಾರ್ಚ್ 2026 ರಂದು ರಾಜ್ಯದ 17ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದ್ದಾರೆ

ಬಜೆಟ್ ನ ಗಾತ್ರ- 4.48 ಲಕ್ಷ ಕೋಟಿ

ಸಿದ್ದರಾಮಯ್ಯ ನವರ 16ನೇ ವಿಧಾನಸಭೆಯ 4ನೇ ಬಜೆಟ್ ಮಂಡಸಿದ್ದಾರೆ . ಈ ಬಾರಿ ಅತಿ ಹೆಚ್ಚು ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 38,455 ಕೋಟಿ ರೂ ಗಳ ಹೆಚ್ಚಳ ಕಂಡಿದೆ. ಕಳೆದ ಬಾರಿ ಗಾತ್ರ 4.09 ಲಕ್ಷ ಕೋಟಿ ರೂ ಆಗಿತ್ತು.

ಈ ಬಾರಿ ಅತಿ ಹೆಚ್ಚು ಶಿಕ್ಷಣಕ್ಕೆ ಮಹತ್ವ ನೀಡಿದ್ದು,

  • ಶಿಕ್ಷಣ ಕ್ಷೇತ್ರಕ್ಕೆ 47,224 ಕೋಟಿ ರೂ ಮೀಸಲು.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರ ಕ್ಕೆ 34,929 ಕೋಟಿ ರೂ
  • ಇಂಧನ ಕ್ಷೇತ್ರ 29,947 ಕೋಟಿ ರೂ
  • ಪಂಚಾಯಿತಿ ಕ್ಷೇತ್ರಕ್ಕೆ 26,559 ಕೋಟಿ ರೂ
  • ಒಳಾಡಳಿತ ಸಾರಿಗೆ ಕ್ಷೇತ್ರಕ್ಕೆ 23,100 ಕೋಟಿ ರೂ.
  • ಗ್ಯಾರಂಟಿ ಯೋಜನಾ ಕ್ಷೇತ್ರಕ್ಕೆ 51,286 ಕೋಟಿ ರೂ.

ಪಂಚ ಗ್ಯಾರಂಟಿ ಯೋಜನಾ ಅನುದಾನ:

  1. ಗೃಹಲಕ್ಷ್ಮಿ ಯೋಜನ = 28,608 ಕೋಟಿ ರೂ
  2. ಗೃಹಾಜ್ಯೋತಿ ಯೋಜನ = 10,100 ಕೋಟಿ ರೂ
  3. ಅನ್ನಭಾಗ್ಯ ಯೋಜನ = 6,200 ಕೋಟಿ ರೂ
  4. ಶಕ್ತಿ ಯೋಜನ = 5,300 ಕೋಟಿ ರೂ
  5. ಯುವನಿಧಿ ಯೋಜನ = 600 ಕೋಟಿ ರೂ

ಒಟ್ಟಾರೆ, ಮುಖ್ಯಮಂತ್ರಿ Siddaramaiah ಅವರು ಮಂಡಿಸಿದ ಕರ್ನಾಟಕ ಬಜೆಟ್ 2026–27 ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕೆ ಮಹತ್ವ ನೀಡುವಂತೆ ರೂಪಿಸಲಾಗಿದೆ. ಶಿಕ್ಷಣ, ಮಹಿಳಾ ಅಭಿವೃದ್ಧಿ, ರೈತರ ಸಹಾಯ ಮತ್ತು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ವಿಶೇಷವಾಗಿ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸಹಾಯ ನೀಡುವ ಪ್ರಮುಖ ಯೋಜನೆಗಳಾಗಿವೆ. ರೈತರಿಗೆ ಶೂನ್ಯ ಬಡ್ಡಿದರ ಸಾಲ, ಹೊಸ ಕೃಷಿ ಯೋಜನೆಗಳು ಹಾಗೂ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕ್ರಮಗಳು ಈ ಬಜೆಟ್‌ನ ಪ್ರಮುಖ ಅಂಶಗಳಾಗಿವೆ.
ಈ ಬಜೆಟ್ ಮೂಲಕ ರಾಜ್ಯ ಸರ್ಕಾರ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ ಎರಡನ್ನೂ ಸಮನ್ವಯಗೊಳಿಸಲು ಪ್ರಯತ್ನಿಸಿದೆ. ಮುಂದಿನ ವರ್ಷಗಳಲ್ಲಿ ಈ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ಇದೆ.

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಂದ್:

16 ವರ್ಷದ ಒಳಗಿನ ಮಕ್ಕಳು ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಪ್ಪ್ ಉಪಯೋಗಿಸುವಂತಿಲ್ಲ. ಇತ್ತೀಚಿಗೆ ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಹವ್ಯಾಸ ಹೆಚ್ಚುತ್ತಿರುವುದು ಹಾಗು ಅದರಿಂದ ಮಕ್ಕಳಿಗೆ ಉಂಟಾಗುತ್ತಿರುವ ಪರಿಣಾಮಗನ್ನು ರಾಜ್ಯ ಸರ್ಕಾರ ಮನಗೊಂಡು ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ವಿಧಿಸಿದೆ. ಏಕೆಂದರೆ ಮಕ್ಕಳಿಗೆ 18 ವರ್ಷ ಆಗುವರೆಗೂ ಮೊಬೈಲ್ ಗಳನ್ನೂ ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರ ಜಾರಿ ಮಾಡುತ್ತಿರುವುದಾಗಿ ಘೋಷಿಸಿದೆ.

ಇನ್ನುಮುಂದೆ ಮದ್ಯದ ಬೇಗೆಗೂ ಸರ್ಕಾರಕ್ಕೂ ಸಂಬಂಧವಿಲ್ಲ. ಇನ್ನುಮುಂದೆ ಮದ್ಯದ ಬೆಲೆಯನ್ನು ಸರ್ಕಾರ ನಿಗದಿ ಪಡಿಸುವುದಿಲ್ಲ. ಮಾರುಕಟ್ಟೆ ಪೈಪೋಟಿ ಆಧರಿಸಿ ದರ ನಿರ್ಧರಿಸುವ ಅಧಿಕರನ್ನು ಉತ್ಪಾದಕರಿಗೆ ನೀಡಲಾಗಿದೆ. ಏಪ್ರಿಲ್ 1 ರಿಂದಲೇ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನ ಆಧರಿಸುವ ಅಭಕಾರಿ ಸುಂಕ ವ್ಯವಸ್ಥೆ ಜಾರಿಗೆ ಬರಲಿದೆ.

30+ ವರ್ಷಗಳ ಬಳಿಕ ವಿದ್ಯಾರ್ಥಿ ಚುನಾವಣೆ:

ಸುಮಾರು ಮೂವತ್ತು ವರ್ಷಗಳ ಬಳಿಕ ಕಾಲೇಜು, ವಿಷವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣಾಗೆ ಮೂರೂ ಜೀವ ನೀಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಾಲೇಜು ದಿನಗಳಿಂದೆಲೆ ನಾಯಕತ್ವಗುಣ, ಒಣಗಾರಿಕೆ ಬೆಳೆಸಲೆಂದು ಈ ನಿರ್ಧಾರ ಕೈಗೊಳ್ಳಾಗಿದೆ. ಚುನಾವಣೆ ಹೆಸರಿನಲ್ಲಿ ಹಿಂಸಾಚಾರ ಹೆಚ್ಚಾದ ಕಾರಣಕ್ಕೆ 1989-90 ವೇಳೆ ಚುನಾವಣೆ ನಿರ್ಬಂಧಿಸಲಾಗಿತ್ತು. ಆದ್ದರಿಂದ ಮತ್ತೆ ಚುನಾವಣೆ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉನ್ನತ ಶಿಕ್ಷಣ :3000 ಬೋಧಕ ಭರ್ತಿ ?

ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 3000 ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಲಾಗಿದೆ.ಈಗಾಗಲೇ 2,000 ಹುದ್ದೆ ಭರ್ತಿಗೆ ಅನುಮತಿಸಿರುವ ಸರ್ಕಾರ, ನೇಮಕಾತಿ ಶೀಘ್ರ ಪೂರ್ಣಗೊಳಿ ನಂತರದಲ್ಲಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಸಾವಿರ ಬೋಧಕ ಹುದ್ದೆಗಳ ಬರ್ತಿ ಘೋಷಿಸಿದೆ. ಇನ್ನು ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ ಅನುಷ್ಠಾನಗೊಳಿಸಿ , 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನ್ನೊಂದು ಪಾಲಿಟೆಕ್ನಿಕ್ ಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಕೆಪಿಎಸ್ ಪರಿಕಲ್ಪನೆ ಯನ್ನು ಉನ್ನತ ಶಿಕ್ಷಣ ಇಲಾಖೆಯು ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.

38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ಸಾಲ

30,000 ಕೋಟಿ ರೂ. ಕೃಷಿ ಸಾಲ, ಪ್ರತಿ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್.

ಅನ್ನದಾತನ ಬೆನ್ನಿಗೆ ನಿಂತಿರುವ ರಾಜ್ಯ ಸರ್ಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಿನ ರೈತರಿಗೆ ಸಾಲ ಸೌಲಭ್ಯವನ್ನು ವಿಸ್ತರಿಸುತ್ತಲೇ ಇದ್ದು 2026 27 ನೇ ಸಾಲಿ ನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30,000 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಪ್ರಕಟಣೆ ಮಾಡಿದೆ.

2024 25 ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18960 ಕೋಟಿ ರೂ. ಸಾಲ ನೀಡಿದ ಸರ್ಕಾರ, 2025 26 ನೇ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲ ವಿತರಿಸುವ ಗುರಿ ಇಟ್ಟಿದ್ದು ಫೆಬ್ರವರಿಗೆ 25 ಲಕ್ಷ ರೈತರಿಗೆ 22 ಸಾವಿರ ಕೋಟಿ ರೂ. ಕೃಷಿ ಸಾಲ ನೀಡಿತ್ತು

17ನೇ ಬಜೆಟ್ ಮುಖ್ಯಾಂಶಗಳು

  • ಧಾರವಾಡದಲ್ಲಿ 4, ಬೆಂಗಳೂರಲ್ಲಿ 2 ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್
  • ಬೆಂಗಳೂರಿನಲ್ಲಿರುವ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಗೆ ‘ಶಾಂತವೇರಿ ಗೋಪಾಲಗೌಡ ಆಸ್ಪತ್ರೆ’ ಎಂದು ಮರು ನಾಮಕರಣ
  • ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ಬಗ್ಗೆ ಘೋಷಣೆ
  • ಕೇಂದ್ರದ ಮಾದರಿಯಲ್ಲೆ ರಾಜ್ಯದಲ್ಲೂ ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ ಮಾಹಿತಿ ನೀಡಲು AI ತಂತ್ರಜ್ಞಾನ ಬಳಕೆ
  • ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸುಧಾರಿಸಲು 204 ಬಿ ಆರ್ ಸಿ ಕೇಂದ್ರಗಳಲ್ಲಿ ಕೇಂದ್ರಕ್ಕೆ ಒಬ್ಬರಂತೆ ಆಪ್ತ ಸಮಾಲೋಚಕರ ನೇಮಕ
  • ಟೈಪ್-1 ಮಧುಮೇಹದಿಂದ ಬಳಲುತ್ತಿರುವ 18 ವಯೋಮಾನದ ವರೆಗಿನ ಮಕ್ಕಳ ಆರೋಗ್ಯ ಸುಧಾರಣೆಗೆ ಉಚಿತ ಇನ್ಸುಲಿನ್ ಪೆನ್ ನೀಡುವುದು
  • ಕೋಲಾರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಬಿತ್ತನೆ ಬೀಜ, ಕೀಟನಾಶಕ ರಸಗೊಬ್ಬರ ಒಂದೇ ಸೂರಿನಡಿ ಒದಗಿಸಲು ರೈತ ಮಾಲ್ ಸ್ಥಾಪನೆ.
  • ಆನೇಕಲ್ ತಾಲೂಕಿನಲ್ಲಿ 80,000 ಹಾಸನ ಸಾಮರ್ಥ್ಯದ ಹೊಸ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ.
  • ಗರ್ಭಿಣಿ, ಬಾಣಂತಿಯರಿಗೆ ಮಧ್ಯಾನದ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆ ಮರು ಜಾರಿ
  • ಕುವೆಂಪು, ಅನಂತಮೂರ್ತಿ ಹೆಸರಲ್ಲಿ ಅಧ್ಯಯನ ಪೀಠ
  • ಕನ್ನಡದಲ್ಲಿಯೇ ಎಲ್ಲಾ ಕಾನೂನುಗಳ ರಚನೆ. ಕೇಂದ್ರದ ಎಲ್ಲಾ ಕಾನೂನು ಕನ್ನಡಕ್ಕೆ ಭಾಷಾಂತರ
  • ಅಂಗನವಾಡಿ ಸಿಬ್ಬಂದಿಗೆ ಹೆಚ್ಚುವರಿ ಸಮವಸ್ತ್ರ

ಹೊಸ ಯೋಜನೆಗಳೇನು?

1.ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ

ಉತ್ಪಾದನೋತ್ತರ ಕೃಷಿ ಚಟುವಟಿಕೆಗಳ ಅಭಿವೃದ್ಧಿ ಉದ್ದೇಶದ ಯೋಜನೆ. ಮುಂದಿನ ಮೂರು ವರ್ಷಗಳಿಗೆ 100 ಕೊಟ್ಟಿರು ರೂ, ಅನುದಾನ ಮೀಸಲು.

2.ವಸುಧಾಮೃತ ಯೋಜನೆ

ಇದು ಮಣ್ಣಿನ ಸಾವಯವ ಇಂಗಾಲ ಹಾಗೂ ಗುಣಮಟ್ಟ ಹೆಚ್ಚಿಸಲು ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಘೋಷಿಸಲಾದ ಯೋಜನೆ.

3.ಸಸ್ಯ ಸಂಜೀವಿನಿ ಯೋಜನೆ

ಬೆಳೆಗಳಲ್ಲಿ ಕೀಟ ಹಾಗೂ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ, ಜೈವಿಕ ಕೀಟನಾಶಕಗಳ ಮೂಲಕ ನಿರ್ವಹಣಾ ಕ್ರಮಗಳನ್ನು ಒದಗಿಸುವ ಯೋಜನೆ

4.ಅಸಂಘಟಿತ ಕಾರ್ಮಿಕರಿಗೆ ಕೌಶಲ್ಯ ಆಧರಿತ ಉದ್ಯೋಗಕ್ಕಾಗಿ ಕಾಯಕ ಭಾಗ್ಯ

ಅಸಂಘಟಿತ ಕಾರ್ಮಿಕರಿಗೆ ಕೌಶಲಧಾರಿತ ಉದ್ಯೋಗ ದೊರಕಿಸಿ ಕೊಡಲು ಆನ್ಲೈನ್ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ ಗುರಿ. ಇದಕ್ಕಾಗಿ ಐದು ಕೋಟಿ ರೂ, ವೆಚ್ಚದ ‘ಕಾಯಕ ಭಾಗ್ಯ’ ಯೋಜನೆ.

5.’ಅನಂತ ಯೋಜನೆ’

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ಮೈಕ್ರೋಗ್ರೀಡ್ ಸ್ಥಾಪಿಸುವ ಯೋಜನೆ. ಗ್ರಾಮ ಪಂಚಾಯಿತಿಗಳಲ್ಲಿನ ಸ್ವಾವಲಂಬಿಯಾಗಿಸುವ ವಾರ್ಷಿಕ 4000 ಮೇನ್ ವಾಟ್ಸ್ ಉತ್ಪಾದಿಸುವ ಗುರಿ.

6.ಸಿಎಂ ಸೌರ ಕೃಷಿ ಯೋಜನೆ

10,500 ಕೋಟಿ ರೂ ವೆಚ್ಚದಲ್ಲಿ 3000 ಮೆಗಾ ವ್ಯಾಟ್ಸ್ ಪ್ರಮತಿಯ ಸೌರ ವಿದ್ಯುತ್ ಘಟಕ ಸ್ಥಾಪನೆ ಕೃಷಿ ಫಿಡರ್ ಸೌರಿಕ ರಣಗೊಳಿಸುವ ಕುಸುಮ್-ಸಿ ಮಾದರಿಯ ಯೋಜನೆ.

7.ಜಾನುವಾರು’ ಫಲದಾರೆ ‘

ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಿಸಲು ವರ್ಷಕ್ಕೊಂದು ಕರು ಎಂಬ ಹೆಸರಲ್ಲಿ 1000 ಗ್ರಾಮಪಂಚಾಯತಿಯಲ್ಲಿ ಹೊಸ ಶಿಬಿರಗಳ ಆರಂಭ.


0 Comments

ನಿಮ್ಮದೊಂದು ಉತ್ತರ

Avatar placeholder

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ