ಭಾರತ VS ನ್ಯೂಜಿಲೆಂಡ್ T20 ವಿಶ್ವಕಪ್ ಫೈನಲ್ 2026: ಯಾರು ಗೆಲ್ಲುತ್ತಾರೆ ಕಪ್ ?

Published by venkteshnaik2003@gmail.com on

2026ರ ಐಸಿಸಿ T20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ . ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಈ ಮಹತ್ವದ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತಿದ್ದಾರೆ.

ಮೂರನೇ ಟಿ 20 ವಿಶ್ವಕಪ್ ನಿರೀಕ್ಷೆಯನ್ನು ಹೆಚ್ಚಿಸಿದ ಭಾರತ.

ಹೌದು 2007 ರಲ್ಲಿ ಭಾರತ ತಂಡದ ನಾಯಕ ಎಂ ಎಸ್ ಧೋನಿ ಅವರ ನೇತೃತ್ವದಲ್ಲಿ ಮೊದಲ ಟಿ 20 ವಿಶ್ವಕಪ್ ಗೆದ್ದಿತ್ತು, ನಂತರ 2024 ರಲ್ಲಿ ರೋಹಿತ್ ಶರ್ಮ ಅವರ ನಾಯಕತ್ವ ದಲ್ಲಿ ಮತ್ತೊಂದ್ದು ಬಾರಿ ತಮ್ಮದಾಗಿಸಿಕೊಂಡರು,

ಈಗ 2026ರಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಮತ್ತೊಮ್ಮೆ ಕಪ್ ಗೆಲ್ಲುವ ಗುರಿ ಹೊಂದಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಅತ್ತ್ಯತ್ತಮ ಪ್ರದರ್ಶನ ನೀಡಿ ಎಲ್ಲಾ ತಂಡಗಳನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿದೆ.

ಪಿಚ್ ಹೇಗಿದೆ.

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾದ ನರೇಂದ್ರ ಮೋದಿ ಸ್ಟೇಡಿಯಂ ಸುಮಾರು 1.30 ಲಕ್ಷ ಜನ ಕುಳಿತು ಕೊಳ್ಳುವ ಸಾಮರ್ಥ್ಯ ಹೊಂದಿದೆ.

ಈ ಪಿಚ್ ಸಾಮಾನ್ಯವಾಗಿ ಬ್ಯಾಟ್ಸಮನ್ ಗಳಿಗೆ ಅನುಕೂಲಕರವಾಗಿದ್ದು ಹೈ ಸ್ಕೋರಿಂಗ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಹೇಗಿದೆ ಭಾರತ ತಂಡ.

ಅಭಿಷೇಕ್ ಶರ್ಮ ಅವರ ಕಳೆಫೇ ಫಾರ್ಮ್ ನಿಂದ ಅವರಿಗೆ ಹೊರಗೆ ಕೂರಿಸಿ ಸಂಜು ಸ್ಯಾಮ್ಸನ್ ಅವರ ಜೊತೆಯಲ್ಲಿ ರಿಂಕು ಸಿಂಗ್ ಅವರನ್ನು ಆಡಿಸಬೇಕೆಂದು ವರದಿಯನ್ನು ನೀಡಿದ್ದಾರೆ, ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರು ಇಳಿಯುವ ಸಾಧ್ಯತೆ ಇದೆ, ಹಾಗೂ ನಂಬರ್ 5 ಹಾರ್ದಿಕ್ ಪಾಂಡ್ಯ ಮತ್ತು ನಂಬರ್ 6ರಲ್ಲಿ ಶಿವಂ ದುಬೆ ಅವರು ಇಳಿಯುವ ಸಾಧ್ಯತೆ ಹೆಚ್ಚಾಗಿದೆ, ಮತ್ತು ಫಿನಿಶರ್ ಎಂದೇ ಖ್ಯಾತಿಯಾಗಿರುವ ಅಕ್ಷರ್ ಪಟೇಲ್ ಅವರು 7ನೇ ಸ್ಥಾನದಲ್ಲಿ ಬರುತ್ತಾರೆ ಈ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇದೆ ಏಕೆಂದರೆ ವರುಣ್ ಚಕ್ರವರ್ತಿ ಅತಿ ದುಬಾರಿಯಾಗಿತ್ತಿರುವುದರಿಂದ ಅವರ ಬದಲಿಗೆ ಕುಲದೀಪ್ ಯಾದವವರನ್ನು ಆಡಿಸಬೇಕೆಂದು ಮಾಹಿತಿಯನ್ನು ನೀಡಿದ್ದಾರೆ ಅದಾದ ನಂತರ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷದೀಪ್ ಸಿಂಗ್ ಇರುತ್ತಾರೆ.

ನ್ಯೂಜಿಲೆಂಡ್ ತಂಡದ ಬಲ.

ನ್ಯೂಜಿಲೆಂಡ್ ತಂಡದಲ್ಲಿ ಫಿನ್ ಅಲೆನ್ ಅವರು ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದಾರೆ ಅವರು ಈ ವರ್ಷದ ವಿಶ್ವಕಪ್ ನಲ್ಲಿ 196 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಹಾಗೂ ಟೀಮ್ ಸೈಫರ್ಟ್ ಇವರಿಬ್ಬರ ಜೊತೆ ಆಟದಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ಲಯವನ್ನು ಕಂಡುಕೊಂಡಿದೆ, ಮತ್ತು ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸಾಂಟ್ನರ್ ಅವರು ಅತ್ಯುತ್ತಮ ಫಾರ್ಮ್ ಇದ್ದಾರೆ ಏಕೆಂದರೆ ಬ್ಯಾಟಿಂಗ್ ಹಾಗೂ ಬೋಲಿಂಗ್ ಎರಡರಲ್ಲೂ ಒಳ್ಳೆಯ ಕಾಂಟ್ರಿಬ್ಯುಶನ್ ನೀಡುತ್ತಿದ್ದಾರೆ ಇವರು ಬ್ಯಾಟಿಂಗ್ ನಲ್ಲಿ ಒಳ್ಳೆಯ ಬಿರುಸಿ ಆಟ ಮತ್ತು ಬೋಲಿಂಗ್ ನಲ್ಲಿ ಒಳ್ಳೆಯ ವಿಕೆಟ್ಗಳನ್ನು ಪಡೆಯುತ್ತಿದ್ದಾರೆ, ಹಾಗು ಫೀಲ್ಡಿಂಗ್ ನಲ್ಲಿ ಗ್ಲೆನ್ ಫಿಲಿಪ್ ಅವರು ರನ್ ಗಳನ್ನೂ ತಡಿಯುತ್ತ ಇದ್ದಾರೆ ಮತ್ತು ಅವರ ಬ್ಯಾಟಿಂಗ್ ನಿಂದ ಒಳ್ಳೆಯ ರನ್ ಕೂಡ ಬರುತ್ತಿದೆ, ಒಟ್ಟಾರೆಯಾಗಿ ನ್ಯೂಜಿಲೆಂಡ್ ತಂಡವು ಬಲಿಷ್ಠವಾಗಿ ಕಾಣುತ್ತಿದೆ.

ಅಭಿಷೇಕ್ ಶರ್ಮ ಅವರಿಗೆ ನೀಡುತ್ತಾರಾ ಮತ್ತೊಂದು ಅವಕಾಶ.

ಹೌದು ಈ ವರ್ಷದ ಟಿ20 ವಿಶ್ವಕಪ್ ನಲ್ಲಿ ಯಾವುದೇ ರೀತಿಯಲ್ಲೂ ಕೂಡ ಅಭಿಷೇಕ್ ಶರ್ಮ ಅವರ ಬ್ಯಾಟಿನಿಂದ ಮಳೆ ಹರಿದು ಬಂದಿಲ್ಲ, ಕೇವಲ ಒಂದು ಮ್ಯಾಚ್ ನಲ್ಲಿ ಮಾತ್ರ ಅವರು 50 ಪ್ಲಸ್ ರನ್ನನ್ನು ಬಾರಿಸಿದರು ನಂತರ ಯಾವುದೇ ರೀತಿಯಲ್ಲೂ ಕೂಡ ರನ್ಗಳನ್ನು ಮಾಡುವಲ್ಲಿ ಯಶಸ್ವಿಯಾಗಿಲ್ಲ ಹಾಗಾಗಿ ಅವರಿಗೆ ಹೊರಗಡೆ ಕುರಿಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ, ಅವರ ಜಾಗದಲ್ಲಿ ಉತ್ತಮ ಫಾರ್ಮ್ ನಲ್ಲಿರುವ ರಿಂಕು ಸಿಂಗ್ ಅವರನ್ನು ಆಡಿಸಬೇಕೆಂದು ವರದಿಯನ್ನು ನೀಡಿದ್ದಾರೆ, ಇಲ್ಲದಿದ್ದರೆ ಅಭಿಷೇಕ್ ಶರ್ಮಾ ಅವರನ್ನು ಈ ಪಂದ್ಯದಲ್ಲಿ ಆಡಿಸಿದರೆ ಅವರು ಉತ್ತಮ ರನ್ನನ್ನು ಕಲೆ ಹಾಕಬೇಕು ಇಲ್ಲದಿದ್ದರೆ ಮುಂದೆ ಅವರಿಗೆ ಕಷ್ಟವಾಗುತ್ತದೆ.

ಮತ್ತೊಂದು ಬಾರಿ ಹೀರೋ ಆಗುತ್ತಾರ ಸಂಜು ಸ್ಯಾಮ್ಸನ್

ಹೌದು ಸದ್ಯ ಈ ವರ್ಷದಲ್ಲಿ ಅತ್ಯುತ್ತಮ ಫಾರ್ಮಲ್ ಇರುವ ಸಂಜು ಸ್ಯಾಮ್ಸನ್ ರವರು ಮತ್ತೊಂದು ಬಾರಿ ಫೈನಲ್ ನಲ್ಲಿ ಉತ್ತಮ ಆಟವನ್ನು ನೀಡಬೇಕೆಂದು ಅಭಿಮಾನಿಗಳ ನಿರೀಕ್ಷೆ ಇದೆ ಕಳೆದ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 80 ಅಂಕಗಳಿಂದ ಅಧಿಕವಾಗಿ ಬಾರಿಸಿದ್ದಾರೆ ಆದ್ದರಿಂದ ಎರಡು ಪಂದ್ಯಗಳು ಗೆಲ್ಲಲು ಮುಖ್ಯ ಕಾರಣ ಸಂಜು ಸ್ಯಾಮ್ಸನ್ ಆಗಿದ್ದಾರೆ , ವೆಸ್ಟ್ ಇಂಡೀಸ್ ತಂಡದ ಮೇಲೆ ಏಕಾಂಗಿಯಾಗಿ ನಿಂತು 97 ರನ್ಗಳನ್ನು ಬಾರಿಸಿ ತಂಡವನ್ನು ಗೆಲ್ಲಿಸಿಕೊಟ್ಟರು, ಮತ್ತು ಇಂಗ್ಲೆಂಡ್ ವಿರುದ್ಧ 86ರಂಗಗಳನ್ನು ಬಾರಿಸಿ ತಂಡದ ಮೊತ್ತ ಗಗನಕೇರಿಸಿದರು ಆದ್ದರಿಂದ ಫೈನಲ್ ನಲ್ಲೂ ಕೂಡ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗನ್ನು ಮಾಡಬೇಕೆಂದು ಪ್ರತಿಯೊಬ್ಬರ ಆಸೆಯಾಗಿದೆ.

ವಿಶ್ವ ಕಪ್ ಗೆಲ್ಲುವ ತಂಡಕ್ಕೆ 27.48 ಕೋಟಿ ಹಾಗಾದರೆ ರಂಗರತ್ತಿಗೆ ಎಷ್ಟು.

ಹಾಲಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡವು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಐಸಿಸಿ ಇಂದ ಸುಮಾರು ₹27.48 ಕೋಟಿ ಬಹುಮಾನವನ್ನು ನೀಡುವುದಾಗಿ ಘೋಷಿಸಿದೆ, ಕಳೆದ ಬಾರಿಗಿಂತ ಈ ಬಾರಿ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ಹಾಗೂ ರನ್ನ ತಂಡವು ಈ ಬಾರಿ ₹14.65 ಕೋಟಿ ನೀಡುವುದಾಗಿ ಘೋಷಿಸಿದೆ. ಹಾಗೂ ಸೆಮಿ ಫೈನಲ್ ನಲ್ಲಿ ಸೋತ ತಂಡಗಳಿಗೆ ಕಲಾ ₹7.24 ಕೋಟಿ ನೀಡುವುದಾಗಿ ಘೋಷಿಸಿದೆ. ಹಾಗೂ ಟೂರ್ನಿಯು ₹120.42 ಕೋಟಿ ಬಹುಮಾನ ಮೊತ್ತ ಒಳಗೊಂಡಿದೆ.

2024 ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತ ತಂಡವು ಪ್ರಶಸ್ತಿ ಗೆದ್ದಾಗ ₹20.42 ಕೋಟಿ ಬಹುಮಾನ ಪಡೆದಿತ್ತು. ಅದರ ಜೊತೆಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹125 ಕೋಟಿ ವಿಶೇಷ ಬಹುಮಾನ ಘೋಷಿಸಿದ್ದರು.

ನಿರ್ಣಾಯಕ ಪಂದ್ಯದಲ್ಲಿ ಸೌತ್ ಆಫ್ರಿಕಾದ ಮಾಜಿ ವೇಗದ ಬೋಲರ್ ಡೆಲ್ ಸ್ಟೈನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಯಾರು ವಿನ್ ಆಗ್ತಾರೆ ಎಂದು ಭವಿಷ್ಯ ನುಡಿದ ಸೌತ್ ಆಫ್ರಿಕಾದ ಮಾಜಿ ಮಾಜಿ ಬೌಲರ್ ಡೆಲ್ ಸ್ಟೇನ್ ಅವರು ಮೌನ ಮುರಿದಿದ್ದಾರೆ. ಈ ಬಾರಿ ವಿಶ್ವಕಪ್ ನಲ್ಲಿ ಇಂಡಿಯಾ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಹಾಗೂ ಈ ಬಾರಿ ನ್ಯೂಜಿಲೆಂಡ್ ಸೋತರೆ ಅವರಿಗೆ ಜೋಕರ್ ಎಂಬ ಪಟ್ಟವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ಏಕೆಂದರೆ ನ್ಯೂಜಿಲೆಂಡ್ ತಂಡವು ನಮ್ಮ ಸೌತ್ ಆಫ್ರಿಕಾ ತಂಡಕ್ಕಿಂತ ಹೆಚ್ಚು ಬಾರಿ ಫೈನಲ್ ಆಡಿದೆ ಆದರೂ ಕೂಡ ಒಂದೇ ಒಂದು ವಿಶ್ವಕಪ್ ಅನ್ನು ಗೆದ್ದಿಲ್ಲ ಹಾಗಾಗಿ ಅವರಿಗೆ ಜೋಕರ್ಸ್ ಪಟ್ಟ ಸೂಕ್ತ ಅನಿಸುತ್ತದೆ ಎಂದು ಹೇಳಿದ್ದಾರೆ. ನನಗೂ ಕೂಡ ನ್ಯೂಜಿಲೆಂಡ್ ಗೆಲ್ಲಬೇಕೆಂದು ಆಸೆ ಇದೆ ಆದರೆ ಭಾರತ ತಂಡವನ್ನು ಸೋಲಿಸಲು ಅಸಾಧ್ಯವೆಂದು ಮೌನ ಮುರಿದಿದ್ದಾರೆ.


0 Comments

ನಿಮ್ಮದೊಂದು ಉತ್ತರ

Avatar placeholder

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ