ಇರಾನ್‌ನ 3 ಡೆಡ್ಲಿ ಕಂಡಿಷನ್‌ಗಳು! ಯುದ್ಧ ನಿಲ್ಲುತ್ತಾ?

Published by venkteshnaik2003@gmail.com on

ಕಳೆದ ಎರಡು ವಾರಗಳಿಂದ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಡ್ರೋನ್ ದಾಳಿ, ಮಿಸೈಲ್ ದಾಳಿ ಮತ್ತು ರಕ್ತಪಾತದಿಂದ ಪರಿಸ್ಥಿತಿ ಗಂಭೀರವಾಗಿದೆ.
ಇದರಿಂದ ಇಡೀ ಜಗತ್ತಿನಲ್ಲಿ ಮತ್ತೆ ದೊಡ್ಡ ಯುದ್ಧ ಆರಂಭವಾಗುತ್ತದೆಯೇ ಎಂಬ ಭಯವೂ ಮೂಡಿದೆ.

ಒಂದು ಕಡೆ ಇಸ್ರೇಲ್ ಮತ್ತು ಅಮೆರಿಕ ಶಾಂತವಾಗಿಲ್ಲ, ಇನ್ನೊಂದು ಕಡೆ ಕೆರಳಿರುವ ಇರಾನ್ ಕೂಡ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.ಸದ್ಯದ ವರದಿಗಳ ಪ್ರಕಾರ ಕಳೆದ 15 ದಿನಗಳಲ್ಲಿ ಇರಾನ್‌ನಲ್ಲಿ ಮಾತ್ರ 300 ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ.ಲೆಬನಾನ್‌ನಲ್ಲಿ 570 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಹತ್ತಾರು ಇಸ್ರೇಲ್ ಮತ್ತು ಅಮೆರಿಕದ ಸೈನಿಕರು ಕೂಡ ಮೃತಪಟ್ಟಿದ್ದಾರೆ.

ಯುದ್ಧ ಆರಂಭವಾದ ಕೇವಲ ಎರಡು ವಾರಗಳಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 3 ಟ್ರಿಲಿಯನ್ ಡಾಲರ್ ಸಂಪತ್ತು ನಷ್ಟವಾಗಿದೆ. ಅಂದರೆ ಇದು ಭಾರತದ GDP ಗೆ ಸಮಾನವಾದಷ್ಟು ದೊಡ್ಡ ನಷ್ಟವಾಗಿದೆ. ಇನ್ನು ಯಾವಾಗ ಬೇಕಾದರೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಬಹುದು.

ಮಧ್ಯಪೂರ್ವ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಯುದ್ಧದ ಪರಿಸ್ಥಿತಿ ಜಗತ್ತಿನ ಗಮನ ಸೆಳೆಯುತ್ತಿದೆ. ಈ ಪರಿಸ್ಥಿತಿಯಲ್ಲಿ ಇರಾನ್ ಕೆಲವು ಕಠಿಣ ಶರತ್ತುಗಳನ್ನು ಮುಂದಿಟ್ಟಿದೆ ಎಂದು ವರದಿಗಳು ಹೇಳುತ್ತಿವೆ. ಈ ಮೂರು ಪ್ರಮುಖ ಶರತ್ತುಗಳು ಪೂರ್ತಿಯಾದರೆ ಮಾತ್ರ ಯುದ್ಧ ನಿಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೊದಲನೇ ಷರತ್ತು

ಇರಾನ್ ಮೊದಲ ಕಂಡೀಶನ್ ಹಾಕಿರೋದು ತನ್ನ ದೇಶದ ಸ್ವಾತಂತ್ರ್ಯದ ಮೇಲೆ ಮೇಲ್ನೋಟಕ್ಕೆ ನಮ್ಮ ಸಾರ್ವಭೌಮ ಹಕ್ಕುಗಳನ್ನು ಅನುಭವಿಸುವುದಕ್ಕೆ ಬಿಡಿ ಅಂತ ಹೇಳ್ತಾ ಇದ್ದಾರೆ ಮತ್ತು ಇರಾನ್ ತನ್ನ ಅಣು ಶಕ್ತಿ ಕಾರ್ಯಕ್ರಮವನ್ನ ಮುಂದುವರಿಸುವುದಕ್ಕೆ ಅಮೆರಿಕ ಅಡ್ಡಿ ಬರಬಾರದು ನಾವು ನ್ಯೂಕ್ಲಿಯರ್ ಪವರ್ ಆಗೋದು ನಮ್ಮ ಹಕ್ಕು ಇದನ್ನ ನೀವು ಒಪ್ಪಲೇಬೇಕು ಅನ್ನೋದನ್ನು ಹೇಳಿದ್ದಾರೆ.

ಆದರೆ ಒಂದು ವಿಚಾರ ಕ್ಲಿಯರ್ ಆಗಿದೆ ಅಮೆರಿಕ ಮತ್ತು ಇಸ್ರೇಲ್ ಈ ಕಂಡೀಷನಿಂಗ್ ಅನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಏಕೆಂದರೆ ಇರಾನ್ ಕೈಯಲ್ಲಿ ಅಣುಬಾಂಬ್ ಸಿಕ್ಕರೆ ಮಿಡಲಿಸ್ಟ್ ನಲ್ಲಿ ಇಸ್ರೇಲ್ ಅಸ್ತಿತ್ವಕ್ಕೆ ಕಂಟಕ ಬರುತ್ತೆ ಇದು ಅಮೆರಿಕಾಗೂ ದೊಡ್ಡ ಭದ್ರತೆ ಭೀತಿ ತಂದು ಇಡುತ್ತದೆ. ಆದ್ದರಿಂದ ಈ ಕಂಡೀಷನಿಂಗ್ ಅಮೆರಿಕ ಮತ್ತು ಇಸ್ರೇಲ್ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.

ಎರಡನೇ ಷರತ್ತು

ಇದು ಜಗತ್ತಿನ ಇತಿಹಾಸದಲ್ಲಿ ಇರಾನ್ ಮೊದಲ ಬಾರಿಗೆ ಇಟ್ಟಿರುವ ಡಿಮ್ಯಾಂಡ್ ನೀವು ನಮ್ಮ ದೇಶದ ಮೇಲೆ ದಾಳಿ ಮಾಡಿ Infrastructure ನಾಶ ಮಾಡಿದ್ದೀರಿ ಅದಕ್ಕೆ ಬಿಲಿಯನ್ ಗಟ್ಟಲೆ ನಷ್ಟ ಪರಿಹಾರ ಕೊಡಬೇಕು ಅಂತ ಇರಾನ್ ಕೇಳುತ್ತಿದೆ

ಕಳೆದ ಎರಡು ವಾರಗಳಲ್ಲಿ ಇರಾನ್ ಸಾಕಷ್ಟು ತೈಲ ಕೇಂದ್ರಗಳು, ಏರ್ಪೋರ್ಟ್ ಗಳು ಮತ್ತು ಹಿಸ್ಟಾರಿಕಲ್ ಪ್ಲೇಸಸ್ ಗಳು ಧ್ವಂಸವಾಗಿದೆ.ಆದರೆ ವಾಸ್ತವವಾಗಿ ನೋಡಿದರೆ ಇಸ್ರೇಲ್ ನೇರವಾಗಿ ನಷ್ಟ ಪರಿಹಾರ ನೀಡುವ ಸಾಧ್ಯತೆ ಬಹಳ ಕಡಿಮೆ. ಆದರೆ ಅಮೆರಿಕಾದ ಬ್ಯಾಂಕುಗಳಲ್ಲಿ ಫ್ರೀಸ್ ಆಗಿರುವ ಇರಾನದ ಸುಮಾರು 100 ಬಿಲಿಯನ್ ಡಾಲರ್ ಹಣವಿದೆ. ಅಮೆರಿಕ ಕೊಟ್ಟರೆ ಈ ಕಂಡೀಶನ್ ಸಾಲ್ವ್ ಆಗಬಹುದು.

ನಷ್ಟ ಪರಿಹಾರ ಸಿಕ್ರೆ ಇರಾನ್ ತನ್ನ ಶಕ್ತಿಯನ್ನು ಮತ್ತೆ ಕಟ್ಟಿಕೊಳ್ಳುತ್ತೆ ಆಗಿಲ್ಲ ಅಂದ್ರೆ ಏನಾಗುತ್ತೆ ಎಂದರೆ ಇರಾನ್ ಅರ್ಮೊಜ್ ಜಲಸಂಧಿಯನ್ನು ಓಪನ್ ಮಾಡೋದಿಲ್ಲ ಜಗತ್ತಿನ ಆಯಿಲ್ ಬೆಲೆ ಬ್ಯಾರೆಲ್ ಗೆ ಸುಮಾರು 150 ಡಾಲರ್ ದಾಟುವ ಸಾಧ್ಯತೆ ಇದೆ , ಇದು ಇಡೀ ಜಗತ್ತಿನ ಎಕಾನಮಿಯನ್ನು ಬಲಿ ತೆಗೆದುಕೊಳ್ಳುತ್ತದೆ.

ಮೂರನೇ ಷರತ್ತು

ಇದು ಇರಾನ್ ಇಟ್ಟಿರುವ ಮೋಸ್ಟ್ ಕ್ರಿಟಿಕಲ್ ಪಾಯಿಂಟ್. ನಾವು ಯುದ್ಧ ನಿಲ್ಲಿಸಿದ ಮೇಲೆ ಇಸ್ರೇಲ್ ಮತ್ತೆ ನಮ್ಮ ನಾಯಕರನ್ನು ಕೊಲ್ಲಲ್ಲ ಅಥವಾ ನಮ್ಮ ಮೇಲೆ ಅಟ್ಯಾಕ್ ಮಾಡೋಲ್ಲ ಅನ್ನೋದಕ್ಕೆ ನಮಗೆ ಲಿಖಿತ ಭರವಸೆ ಬೇಕು ಅಂತ ಕೇಳುತ್ತಿದೆ. ಆದರೆ ಇದು ಒಮ್ಮತಕ್ಕೆ ಬರೋದು ತುಂಬಾ ಕಷ್ಟ.

ಒಪ್ಪಿಗೆ ಆದ್ರೆ ಏನಾಗುತ್ತದೆ ಎಂದರೆ ಜಾಗತಿಕ ಮಾರುಕಟ್ಟೆ ಮತ್ತೆ ಉಸಿರಾಡುವ ಚಾನ್ಸ್ ಜಾಸ್ತಿ ಇರುತ್ತೆ ಇದಕ್ಕೆ ಮೊದಲು ಡೊನೊಲ್ಡ್ ಟ್ರಂಪ್ ಒಪ್ಪುವ ಸಾಧ್ಯತೆ ಬಹಳ ಕಡಿಮೆ ಇದೆ ಆದರೆ ಈ ಶರತ್ತುಗಳನ್ನು ಯಾವುದೇ ಕಾರಣಕ್ಕೂ ಒಪ್ಪದೇ ಇರಬಹುದು.

ಜಾಗತಿಕ ಪರಿಣಾಮ

ಈ ಯುದ್ಧದ ಪರಿಣಾಮ ಜಗತ್ತಿನ ಆರ್ಥಿಕತೆಯ ಮೇಲೂ ಬೀಳುತ್ತಿದೆ. ಪೆಟ್ರೋಲ್ ಬೆಲೆ, ವ್ಯಾಪಾರ ಮಾರ್ಗಗಳು ಮತ್ತು ಹಲವಾರು ವಸ್ತುಗಳ ಸರಬರಾಜು ಮೇಲೆ ಇದರ ಪರಿಣಾಮ ಕಂಡುಬರುತ್ತಿದೆ.

ಒಟ್ಟಿನಲ್ಲಿ ಇರಾನ್ ಮುಂದಿಟ್ಟಿರುವ ಈ ಮೂರು ಶರತ್ತುಗಳು ಪೂರ್ತಿಯಾದರೆ ಯುದ್ಧ ನಿಲ್ಲುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.


0 Comments

ನಿಮ್ಮದೊಂದು ಉತ್ತರ

Avatar placeholder

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ