“ಬಿರ್ಲಾ ಗ್ರೂಪ್ ಗೇ 16,700 ಕೋಟಿ ರೂ ಗೆ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು”

Published by venkteshnaik2003@gmail.com on

ಕಪ್ ಹಿಡಿದಿರುವ ಕ್ಷಣ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದು ಬರಿ ಒಂದು ಹೆಸರಲ್ಲ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಅಪ್ಪಟ ಎಮೋಷನ್ ಇಂತಹ ಹೆಮ್ಮೆಯ ಟೀ ಆರ್‌ಸಿಬಿ ಕಂಪ್ಲೀಟ್ ಆಗಿ ಸೇಲ್ ಆಗಿದೆ, ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಭೂಕಂಪ ಆಗಿದೆ ವಿಜಯ್ ಮಲ್ಯ ಅವರಿಂದ ಶುರುವಾಗಿ Diageo ಕಂಪನಿಯಲ್ಲಿದ್ದ ಆರ್‌ಸಿಬಿ ಈಗ ಅಫಿಶಿಯಲ್ ಆಗಿ ಹೊಸ ಓನರ್ ಗಳ ಪಾಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದು ಸಣ್ಣಪುಟ್ಟ ಮೊತ್ತಕ್ಕೆ ಸೇಲ್ ಆಗಿಲ್ಲ ಬರೋಬ್ಬರಿ 16,700 ಕೋಟಿ ರೂಪಾಯಿಗೆ ಮಾರಾಟವಾಗಿದೆ, ಇದು ಐಪಿಎಲ್ ಮಾತ್ರ ಅಲ್ಲ ಇಡೀ ವಿಶ್ವ ಜಗತ್ತೇ ದಂಗಾಗುವಂತೆ ಮಾಡಿದೆ.

16700 ಕೋಟಿಯ ‘ಮಹಾ’ ಡಿಲ್! ಕಪ್ ಬರ್ತಿದ್ದಂತೆ ಮಾರಾಟವಾಯಿತು..

ಹೌದು ಮಾರ್ಚ್ 24 -2026 ಈ ದಿನ ಐಪಿಎಲ್ ಇತಿಹಾಸದಲ್ಲಿ ಸುವರ್ಣಾಕಾಶದಲ್ಲಿ ಬರೆದಿಡೊ ದಿನ ಆರ್‌ಸಿಬಿ ಕಪ್ ಗೆದ್ದ ದಿನದಿಂದಲೂ ಈ ಸುದ್ದಿ ಹರಿದಾಡುತ್ತಾ ಇತ್ತು ಸೇಲ್ ಆಗುತ್ತೆ ಅಂತ ಈಗ Reuters News ಎಜೆನ್ಸಿUSL ಕಂಪನಿಯ ಅಫೀಷಿಯಲ್ ರಿಪೋರ್ಟ್ ಪ್ರಕಾರ ಈ ಬೃಹತ್ ಡೀಲ್ ಫೈನಲ್ ಆಗಿ ಹೋಗಿದೆ.

ಈ ಮೊದಲು ಗೊತ್ತಿರುವ ಹಾಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಮಾಡ್ತಾ ಇದ್ದಿದ್ದು ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಅನ್ನುವ ಕಂಪನಿ ಇದರ 100% ಶೇರ್ಸ್ ಬ್ರಿಟನ್ ಮೂಲದ ಎಣ್ಣೆ ಕಂಪನಿ Diageo ಅತ್ರ ಇತ್ತು. ಈಗ Diageo ತನ್ನ ಬಳಿ ಇದ್ದ ಆರ್ಸಿಬಿಯಾ ರೂ.100% ಶೇರ್ಸ್ ಕಂಪ್ಲೀಟ್ ಆಗಿ ಸೇಲ್ ಮಾಡಿದ್ದಾರೆ.

ಇದನ್ನು ಮುಖ್ಯವಾಗಿ ಗಮನಿಸುವುದಾದರೆ ಕೇವಲ ವಿರಾಟ್ ಕೊಹ್ಲಿ ಅವರ ಪುರುಷರ ಟೀಮ್ ಅಷ್ಟೇ ಅಲ್ಲ ಮಹಿಳೆಯರ ಸ್ಮೃತಿ ಮಂದಾನ ಅವರ ಟೀಮ್ ಗಳನ್ನು ಒಟ್ಟಿಗೆ ಖರೀದಿ ಮಾಡಿದ್ದಾರೆ.

ಯಾರು ಈ ಹೊಸ ಮಾಲೀಕರು? ನಾಲ್ಕು ದಿಗ್ಗಜರ ಮೆಗಾ ಎಂಟ್ರಿ!

ಇಷ್ಟೊಂದು ಮೊತ್ತವನ್ನು ಕೊಟ್ಟು ಬರಿ ಒಬ್ಬ ಮಾಲೀಕ ಅಥವಾ ಒಂದು ಕಂಪನಿಯಿಂದ ಖರೀದಿ ಮಾಡುವುದು ಸುಲಭವಲ್ಲ ಆದ್ದರಿಂದ ಸಂಸ್ಥೆಗಳ ಒಕ್ಕೂಟದಿಂದ ಮಾಡಿದ್ದಾರೆ ಅದರಲ್ಲಿ ಮೊದಲನೇಯವರು ಆದಿತ್ಯ ಬಿರ್ಲಾ, ಎರಡನೆಯವರು The Times Of India Group, ಇದು ಭಾರತದ ಅತಿ ದೊಡ್ಡ ನ್ಯೂಸ್ ಮೀಡಿಯಾ ಗ್ರೂಪ್ ಆಗಿದೆ, ಮೂರನೆಯದು “Bolt Ventures” ಇವರು ಅಮೆರಿಕದ ಫೇಮಸ್ ಸ್ಪೋರ್ಟ್ಸ್ ಇನ್ವೆಸ್ಟರ್ ‘David Blitzer‘ ಅವರ ಕಂಪನಿ, ನಾಲ್ಕನೆಯದು ‘Black Stone‘ ಇದು ಜಗತ್ತಿನ ಅತಿ ದೊಡ್ಡ ಖಾಸಗಿ ಹೂಡಿಕೆ ಸಂಸ್ಥೆಯಾಗಿದೆ. ಈ ನಾಲ್ಕು ಕಂಪನಿಗಳು ಸೇರಿ ಆರ್‌ಸಿಬಿಯನ್ನು ಖರೀದಿ ಮಾಡಿದ್ದಾರೆ.

ಅಮೇರಿಕಾದ ಸ್ಪೋರ್ಟ್ಸ್ ಡಾನ್ ಗಳ ಕಣ್ಣು ಆರ್‌ಸಿಬಿ ಮೇಲೆ ಬಿದ್ದಿದ್ದೇಕೆ?

David Blitzer ಅನ್ನೋದು ಸ್ಪೋರ್ಟ್ಸ್ ವರ್ಲ್ಡ್ ನಲ್ಲಿ ಅತಿ ದೊಡ್ಡ ಹೆಸರು, ಇದು ಜಗತ್ತಿನಾದ್ಯಂತ ಹಲವಾರು ಟಾಕ್ ಸ್ಪೋರ್ಟ್ಸ್ ಟೀಮ್ ಗಳನ್ನು ಹೊಂದಿದೆ. ಇನ್ನು ಬ್ಲಾಕ್ ಸ್ಟೋನ್ ವಿಚಾರಕ್ಕೆ ಬಂದ್ರೆ ಇದು ಸಣ್ಣಪುಟ್ಟ ಕಂಪನಿ ಅಲ್ಲ ಇದರ ಒಟ್ಟು ಆಸ್ತಿ ಮೌಲ್ಯ AUM1.3 ಟ್ರಿಲಿಯನ್ ಡಾಲರ್ ಅಂದರೆ ಲಕ್ಷಾಂತರ ಕೋಟಿ ಡಾಲರ್ ಗಳನ್ನು ಮ್ಯಾನೇಜ್ ಮಾಡುವ ಗ್ಲೋಬಲ್ ಇನ್ವೆಸ್ಟ್ಮೆಂಟ್ ಕಂಪನಿ. ಆದ್ದರಿಂದ ಬ್ಲಾಕ್ ಸ್ಟೋನ್ ಕಂಪನಿ ಕೂಡ ಆರ್ ಸಿಬಿ ಮೇಲೆ ಕಣ್ಣಿಟ್ಟಿದೆ.

485 ಕೋಟಿಯಿಂದ 16700 ಕೋಟಿಗೆ 15 ಪಟ್ಟು ಬೆಳೆದ ‘ಬ್ರಾಂಡ್’ ಆರ್ಸಿಬಿ!

ಕೇವಲ 18 ವರ್ಷಗಳಲ್ಲಿ ಆರ್ ಸಿಬಿ ಬ್ರಾಂಡ್ 15 ಪಟ್ಟು ಬೆಳೆದಿದೆ. 2008ರಲ್ಲಿ ಐಪಿಎಲ್ ಶುರುವಾದಾಗ ವಿಜಯ್ ಮಲ್ಯಾ ಆರ್ ಸಿಬಿ ನ ಖರೀದಿ ಮಾಡಿದ್ದು ಕೇವಲ 485 ಕೋಟಿ ರೂಪಾಯಿಗಳಿಗೆ ಆದರೆ ಇವತ್ತು ಅಂದರೆ 2026ರಲ್ಲಿ ಆರ್ ಸಿಬಿ ಸೇಲ್ ಆಗಿರೋದು ಬರೋಬ್ಬರಿ 16.17 ಕೋಟಿ ರೂ. ಗಳಿಗೆ ಸೆಲಾಗಿದೆ. ಆರ್‌ಸಿಬಿಯು ಐಪಿಎಲ್ ಎಲ್ಲಾ ತಂಡಗಳ ರೆಕಾರ್ಡ್ ಗಳನ್ನು ಮುರಿದಿದ್ದಾರೆ.

ಆರ್‌ಸಿಬಿ ತಂಡವು ಈಗ ಜಗತ್ತಿನ ಅತ್ಯಂತ ದುಬಾರಿ ಟಿ ಟ್ವೆಂಟಿ ಫ್ರಾಂಚೈಸಿ ಗಳಲ್ಲಿ ನಂಬರ್ 01 ಸ್ಥಾನವನ್ನು ಪಡೆದುಕೊಂಡಿದೆ. ಇದು ಇಷ್ಟರ ಮಟ್ಟಿಗೆ ಬೆಳೆಯೋಕೆ ಆರ್‌ಸಿಬಿ ಬ್ರಾಂಡ್ ನಾ ಪವರ್. 17 ವರ್ಷ ಕಪ್ ಗೆಲ್ದೆ ಹೋದರು ಕೂಡ ಜಗತ್ತಿನ ಅತಿ ಹೆಚ್ಚು ರಾಯಲ್ ಮತ್ತು ಲಾಯಲ್ ಫ್ಯಾನ್ ಬೇಸ್ ಇರೊ ಟೀಮ್ ಅಂದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಆಗಿದೆ.

ಅಂದು ಆಟಗಾರ.. ಇಂದು ಬಾಸ್ ಯಾರು ಈ ಆರ್ಯಮಾನ್ ಬಿರ್ಲಾ?

ಆರ್ಯಮಾನ್ ಬಿರ್ಲಾ ಅವರ ಭಾವಚಿತ್ರ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಚೇರ್ಮೆನ್ ಆಗಿ ಕುಮಾರ ಮಂಗಳಮ್ ಬಿರ್ಲಾ ಅವರ ಮಗ ಆರ್ಯಮಾನ್ ವಿಕ್ರಮ್ ಬಿರ್ಲಾ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಆರ್ಯಮಾನ್ ಬಿರ್ಲಾ ಬೇರೆ ಯಾರು ಅಲ್ಲ ಒಬ್ಬ ಪ್ರೊಫೆಷನಲ್ ಕ್ರಿಕೆಟರ್, ಇವರು ಸಾವಿರಾರು ಕೋಟಿಯ ಒಡೆಯ ನಾಗಿದ್ದರು ಕೂಡ ತಮ್ಮ ಸ್ವಂತ ಪರಿಶ್ರಮದಲ್ಲೇ ಕ್ರಿಕೆಟ್ ನಲ್ಲಿ ಬೆಳೆದವರು.

ಆರ್ಯಮಾನ್ ಬಿರ್ಲಾ ಅವರು ಮಧ್ಯಪ್ರದೇಶ ಪರ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಫಸ್ಟ್ ಕ್ಲಾಸ್ ಮ್ಯಾಚ್ ನಲ್ಲಿ ಬಂಗಾಳದ ವಿರುದ್ಧ ಸೆಂಚುರಿ ಎಲ್ಲ ಹೊಡೆದಿದ್ದರು. ಅಷ್ಟೆ ಅಲ್ಲದೆ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಟೀಮ್ ನಲ್ಲಿ ಆಯ್ಕೆಯಾಗಿದ್ದರು ಆದರೆ 2019 ರಲ್ಲಿ ಸ್ವಲ್ಪ ಮಾನಸಿಕ ಕಿನ್ನತೆ ಬಂದು ದಿಟ್ಟ ನಿರ್ಧಾರ ತಗೆದುಕೊಂಡು ಕ್ರಿಕೆಟ್ ಅನ್ನೆ ನಿಲ್ಲಿಸಿದರು. ಈಗ ಆರ್ಯಮಾನ್ ಬಿರ್ಲಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರಾಗಿದ್ದಾರೆ.

ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ?

ಈ ದೊಡ್ಡ ಡೀಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. Royal Challengers Bangalore ಅಭಿಮಾನಿಗಳು ಈ ಸುದ್ದಿಯನ್ನು ಕೇಳಿ ಶಾಕ್ ಆಗಿದ್ದಾರೆ. ಕೆಲವರು “ಇದು ನಿಜವಾಗಿದೆಯಾ?” ಅಂತ ಪ್ರಶ್ನೆ ಕೇಳ್ತಿದ್ರೆ, ಇನ್ನೂ ಕೆಲವರು “ಹೊಸ ಮಾಲೀಕರು ಬಂದರೆ ತಂಡ ಇನ್ನಷ್ಟು ಬಲವಾಗುತ್ತೆ” ಅಂತ positive ಆಗಿ ನೋಡ್ತಿದ್ದಾರೆ. ಟ್ವಿಟ್ಟರ್, ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ ನಲ್ಲಿ ಈ ವಿಷಯ ಟ್ರೆಂಡಿಂಗ್ ಆಗಿದ್ದು, RCB fans ತಮ್ಮ ಅಭಿಪ್ರಾಯಗಳನ್ನು share ಮಾಡ್ತಿದ್ದಾರೆ.
ಕೆಲ ಅಭಿಮಾನಿಗಳು ಹಳೆಯ ಮಾಲೀಕರ ಜೊತೆಗೆ ಇರುವ emotional connect ಬಗ್ಗೆ ಹೇಳ್ತಿದ್ರೆ, ಇನ್ನೂ ಕೆಲವರು “ಇಗಾದರೂ ಕಪ್ ಬರ್ತಾ?” ಅಂತ expect ಮಾಡ್ತಿದ್ದಾರೆ. ಒಟ್ಟಿನಲ್ಲಿ ಈ ಸುದ್ದಿ RCB ಅಭಿಮಾನಿಗಳಲ್ಲಿ mix reaction create ಮಾಡಿದೆ.


0 Comments

ನಿಮ್ಮದೊಂದು ಉತ್ತರ

Avatar placeholder

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ